No Noise. Just News
By Ram Chethan • Aug 13, 2025, 07:41 PM
ಸಂತ’, ‘ಮಲ್ಲಿಕಾರ್ಜುನ’, ‘ನಾಗರಹಾವು’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಮುರಳಿ ಮೋಹನ್ (57) ಅನಾರೋಗ್ಯದಿಂದ ಇಂದು ನಿಧನರಾದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಶೋಕದ ವಾತಾವರಣ ಆವರಿಸಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಚಿನ್ನದ ಮಾಫಿಯಾ ಸಾಮ್ರಾಜ್ಯಕ್ಕೆ ಮರಳುವ ಕಥೆಯೊಂದಿಗೆ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. 150 ಕೋಟಿ ಸಂಭಾವನೆ ಪಡೆದ ಈ ಚಿತ್ರಕ್ಕೆ ತಮಿಳು, ತೆಲುಗು ರಾಜ್ಯಗಳಲ್ಲಿ ಅಪಾರ ಕ್ರೇಜ್ ಹರಡಿದೆ.
‘ಮಿನ್ನಲ್ ಮುರಳಿ’ಯಿಂದ ಆರಂಭವಾದ ವೀಕೆಂಡ್ ಸಿನೆಮ್ಯಾಟಿಕ್ ಯೂನಿವರ್ಸ್, ಹಾಸ್ಯ, ಸಾಹಸ ಮತ್ತು ಸಸ್ಪೆನ್ಸ್ ಸೇರಿಸಿದ ವಿಶಿಷ್ಟ ಕಥೆಗಳ ಮೂಲಕ ಮಲಯಾಳಂ ಸಿನೆಮಾದಲ್ಲಿ ಹೊಸ ಅಲೆ ಎಬ್ಬಿಸಿದೆ. ಪ್ರತಿಯೊಂದು ಚಿತ್ರವೂ ಹಿಂದಿನ ಕಥೆಯಿಂದ ಪ್ರೇರಣೆ ಪಡೆದು ಮುಂದಿನ ಅಧ್ಯಾಯವನ್ನು ಕಟ್ಟುತ್ತಿದೆ.
ಸುಪ್ರೀಂ ಕೋರ್ಟ್ ಆದೇಶದ ಬಳಿಕ ಬೀದಿ ನಾಯಿಗಳ ಯೋಗಕ್ಷೇಮದ ಬಗ್ಗೆ ಚಿಂತೆಯನ್ನ ವ್ಯಕ್ತಪಡಿಸಿದ ನಟ ಸುದೀಪ್, ಜನರನ್ನು ದತ್ತು ಪಡೆಯಲು ಕರೆ ನೀಡಿದ್ದಾರೆ. ಪ್ರೀತಿ ಮತ್ತು ನಿಷ್ಠೆ ನೀಡುವ ಈ ಜೀವಿಗಳಿಗೆ ಮನೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.