2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರೋಕ್ಷ ತೆರಿಗೆ (Indirect Taxes) ಮತ್ತು ಕಸ್ಟಮ್ಸ್ ಸುಂಕಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಬದಲಾವಣೆಗಳನ್ನು ಘೋಷಿಸಿದ್ದಾರೆ.ಪ್ರಮುಖ ಪರೋಕ್ಷ ತೆರಿಗೆಗಳು:1. ಕಸ್ಟಮ್ಸ್ ಟ್ಯಾರಿಫ್ ರಚನೆಯ ಸರಳೀಕರ:ಕೈಗಾರಿಕಾ ಸರಕುಗಳ ಆಮದು ಮತ್ತು ರಫ್ತು ಪ್ರಕ್ರಿಯೆಯನ್ನು ಸುಗಮಗೊಳಿಸಲು ಸರ್ಕಾರವು ಕಸ್ಟಮ್ಸ್ ಟ್ಯಾರಿಫ್ ರಚನೆಯನ್ನು ಮರುಸಂಘಟಿಸಿದೆ. ಇದುವರೆಗೆ ಇದ್ದ ಸಂಕೀರ್ಣ ತೆರಿಗೆ ಹಂತಗಳನ್ನು ಕಡಿಮೆ ಮಾಡಿ, ಸುಂಕದ ದರಗಳನ್ನು ಸರಳಗೊಳಿಸಲಾಗಿದೆ. ಇದರಿಂದಾಗಿ ವರ್ಗೀಕರಣ ವಿವಾದಗಳು ಕಡಿಮೆಯಾಗಲಿದ್ದು, ಆಮದುದಾರರಿಗೆ ವ್ಯವಹಾರ ನಡೆಸಲು