ಬೆಂಗಳೂರು: ಸಮರ್ಥ ಭಾರತ ಮತ್ತು ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ 12ನೇ ವರ್ಷದ 'BE GOOD, DO GOOD' ಅಭಿಯಾನದ ಅಂಗವಾಗಿ ನಡೆದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶಗಳು ಹೊರಬಿದ್ದಿವೆ.
ಸ್ವಾಮಿ ವಿವೇಕಾನಂದರ 162ನೇ ಜನ್ಮದಿನೋತ್ಸವ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ‘ನವಭಾರತದ ಕುರಿತು ಸ್ವಾಮಿ ವಿವೇಕಾನಂದರ ಚಿಂತನೆಗಳು’ ಎಂಬ ವಿಷಯದ ಕುರಿತು ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ವಿಜೇತರು ಯಾರು?
ಸ್ಪರ್ಧೆಯಲ್ಲಿ ಸುಳ್ಯದ ಶರಣ್ಯ ಎಸ್. ಅವರು ಪ್ರಥಮ ಸ್ಥಾನ ಗಳಿಸಿದರೆ, ಬೆಂಗಳೂರಿನ ಭೂಮಿಕಾ ದ್ವಿತೀಯ ಹಾಗೂ ದಾವಣಗೆರೆಯ ಅನುಷಾ ತೃತೀಯ ಸ್ಥಾನ ಪಡೆದಿದ್ದಾರೆ.
ಸ್ಥಾನ | ವಿಜೇತರ ಹೆಸರು | ಊರು/ಜಿಲ್ಲೆ
ಪ್ರಥಮ : ಶರಣ್ಯ. ಎಸ್. ಅಜ್ಜಾವರ, ಸುಳ್ಯ
ದ್ವಿತೀಯ : ಭೂಮಿಕಾ. ಹೆಚ್.ಕೆ. ಕುಂಬಳಗೋಡು, ಬೆಂಗಳೂರು
ತೃತೀಯ : ಅನುಷಾ ಜಿ.ಪಿ. ದಾವಣಗೆರೆ
ಇವರಲ್ಲದೆ ಬೆಂಗಳೂರು, ಮೈಸೂರು, ಬೆಳಗಾವಿ, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 20 ವಿದ್ಯಾರ್ಥಿಗಳನ್ನು ‘ಸಮಾಧಾನಕರ ಬಹುಮಾನ’ಕ್ಕಾಗಿ ಆಯ್ಕೆ ಮಾಡಲಾಗಿದೆ .
ಸಮಾಧಾನಕರ ಬಹುಮಾನ ವಿಜೇತರು:
ಅಶೋಕ ಎಲ್ (ತುಮಕೂರು), ಸಂಜಯ್ (ಯಾದಗಿರಿ), ಕಾವೇರಿ ಎಂ. ಹೆಗಡೆ (ಬೆಳಗಾವಿ), ನಿಸರ್ಗ ಎಚ್.ಜಿ (ಬೆಂಗಳೂರು), ನಿಸರ್ಗ (ಹಾಸನ), ಜೇನಿಕಾ ಪೂವಣ್ಣ ಜೆ (ಮೈಸೂರು), ಅರುಣ (ಉಡುಪಿ), ಪ್ರಿಯಾ ಎಸ್ (ಬೆಂಗಳೂರು), ಯಶಸ್ವಿನಿ ಕೆ.ಟಿ (ಬೆಂಗಳೂರು), ಮಹಾಲಕ್ಷ್ಮಿ ಎಂ (ಮೈಸೂರು), ಶೋಭಾ ಶಂಕರ ಗೌಡ ಪಾಟೀಲ್ (ಕಲಘಟಗಿ), ಸಂಜನಾ ನಾಯ್ಕ (ಹೊನ್ನಾವರ), ನಾಗಿಣಿ ಎಸ್. ಪಡೀಲ್ (ಮಂಗಳೂರು), ಪೂಜಾ ಮಹಾದೇವ ಸಾರವಾಡ (ವಿಜಯಪುರ), ರೇಣುಕಾ ಎನ್ (ದಾವಣಗೆರೆ), ವಿನುತಾ ಪ್ರಕಾಶ್ ನಾಯಕ (ಅಂಕೋಲಾ), ರೂಪಶ್ರೀ ಡಿ (ಬೆಂಗಳೂರು), ವಿಜಯಲಕ್ಷ್ಮಿ ಎನ್ (ಕಲಬುರಗಿ), ಪ್ರತೀಕ್ಷಾ ಪಾಟೀಲ್ ಪಿ.ಎ (ಚನ್ನಗಿರಿ) ಮತ್ತು ಅಪರ್ಣ ಸಂಕ್ಲಾಪುರ್ (ಕೊಪ್ಪಳ) .
ಬಹುಮಾನ ವಿತರಣಾ ಸಮಾರಂಭದ ವಿವರಗಳು
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಸಮಾರಂಭವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ: ಫೆಬ್ರವರಿ 22, 2026, ಭಾನುವಾರ.
ಸಮಯ: ಬೆಳಿಗ್ಗೆ 10:00 ಗಂಟೆಗೆ.
ಸ್ಥಳ: ದಿ ಮಿಥಿಕ್ ಸೊಸೈಟಿ ಸಭಾಂಗಣ, ಕೆ.ಆರ್. ವೃತ್ತದ ಬಳಿ, ಬೆಂಗಳೂರು.